Signed in as:
filler@godaddy.com
ಅಂದಹಾಗೆ ಸರ್ಕಾರ ಕೊಡುವ ಪದಕಗಳು ಮತ್ತು ಪ್ರಶಸ್ತಿಗಳು ಮಾರಾಟವಾಗುತ್ತಿವೆಯಾ?
ಈ ರೀತಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮಗಳಲ್ಲಿ ತೊಡಗಿ ನೂರಾರು ಕೋಟಿ ಆಸ್ತಿ ಮಾಡಿರುವ ಮತ್ತು ಹಲವು ಸಂದರ್ಭಗಳಲ್ಲಿ ತಮ್ಮ ಕಾನೂನುಬಾಹಿರ ಕೃತ್ಯಗಳ ಕಾರಣಕ್ಕೆ ಲೋಕಾಯುಕ್ತ ರೇಡ್ ಆಗಿ ತನಿಖೆ ಎದುರಿಸುತ್ತಿರುವ ಮತ್ತು ಇಲಾಖೆಯಿಂದ ಶಿಸ್ತುಕ್ರಮಕ್ಕೆ ತುತ್ತಾಗಿರುವ ಇಂತಹ ಹಲವು ಜನರಿಗೆ ಸರ್ಕಾರ ಪದಕ ಮತ್ತು ಪ್ರಶಸ್ತಿಗಳನ್ನು ನೀಡುತ್ತಿರುವುದರಿಂದ ನನಗೆ ಸರ್ಕಾರ ಕೊಡುವ ಪ್ರಶಸ್ತಿ ಮತ್ತು ಪದಕಗಳು ಮಾರಾಟವಾಗುತ್ತಿವೆಯಾ ಎಂಬ ಅನುಮಾನ ಮೂಡುತ್ತಿದೆ
ಸುಮಾರು 4 ಕೋಟಿ ಬೆಲೆ ಬಾಳುವ ವಿವಾದಿತ ಮನೆಯೊಂದನ್ನು ತನ್ನ ಸಂಬಂಧಿಕರ ಹೆಸರಿಗೆ ಬರೆದುಕೊಡುವಂತೆ ನಾಗರಭಾವಿ ನಿವಾಸಿಯೊಬ್ಬರಿಗೆ ನಿರಂತರವಾಗಿ ಕಿರುಕುಳ ನೀಡಿ, ಅವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಹೆದರಿಸಿ, ಬಲವಂತವಾಗಿ ಅವರ ಆಸ್ತಿ ಲಪಟಾಯಿಸುವ ಡೀಲ್ ನಡೆಸುವ ವೇಳೆ ಲೋಕಾಯುಕ್ತ ರೇಡ್ ಆಗಿ ಆಪಾದಿತ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕುಮಾರ್ A.V ಓಡಿಹೋಗಿದ್ದಾನೆ. ಎಂದಿನಂತೆ ಪೊಲೀಸ್ ಮೇಲಧಿಕಾರಿಗಳ ಅಜ್ಞಾಪಾಲಕರಾಗಿ ಮೇಲಧಿಕಾರಿಗಳು ಹೇಳುವ ಕಾನೂನು/ಕಾನೂನುಬಾಹಿರ ಕೆಲಸಗಳನ್ನು ಹಿಂದೆಮುಂದೆ ನೋಡದೆ ಮಾಡುವ ಕಾನ್ಸ್ಟೇಬಲ್’ಗಳು ಲೋಕಾಯುಕ್ತ ಪೊಲೀಸರ ಅತಿಥಿಗಳಾಗಿದ್ದಾರೆ.
ಇಲ್ಲಿ ಶಾಕಿಂಗ್ ವಿಚಾರ ಏನೆಂದರೆ ಪೊಲೀಸರಿಗೆ ತಮ್ಮ ಅಸಾಧಾರಣ ಸೇವೆ ಮತ್ತು ಧೈರ್ಯಕ್ಕೆಂದು ನೀಡಲಾಗುವ ಮುಖ್ಯಮಂತ್ರಿ ಪದಕಕ್ಕೆ ಈ ರೌಡಿ ಪೊಲೀಸ್ ಆಯ್ಕೆಯಾಗಿದ್ದನಂತೆ. ಈ ಘಟನೆ ನಡೆಯದೇ ಹೋಗಿದ್ದರೆ ಸಾಹೇಬರು ಗರಿಗರಿ ಖಾಕಿ ಧರಿಸಿ ಮುಖ್ಯಮಂತ್ರಿಗಳಿಂದ ಇಂದು ಪದಕ ಪಡೆದುಕೊಳ್ಳುತ್ತಿದ್ದರು.
ಇದಕ್ಕೆ ಪುಷ್ಟಿ ನೀಡುವಂತ ಇನ್ನೊಂದು ಪ್ರಕರಣ ಹೇಳುವುದಾದರೆ ನಮ್ಮ ಕುಣಿಗಲ್’ನಲ್ಲಿ ಗುರುಪ್ರಸಾದ್ ಎಂಬ ನಟೋರಿಯಸ್ ಕ್ರಿಮಿನಲ್ ಒಬ್ಬ ಯುನಿಫಾರ್ಮ್ ಧರಿಸಿ ಪೊಲೀಸ್ ಇನ್ಸ್ಪೆಕ್ಟರ್ ವೃತ್ತಿ ಮಾಡುತ್ತಿದ್ದ. ಆತನೂ ಈಗಾಗಲೇ ನೂರಾರು ಕೋಟಿ ಆಸ್ತಿ ಮಾಡಿದ್ದಾನೆಂಬ ವಿಷಯ ಚರ್ಚೆಯಾಗುತ್ತಿದೆ. ಈ
ಬಹಳ ದುರಹಂಕಾರಿ, ಹಣದ ಮದವನ್ನು ನೆತ್ತಿಗೇರಿಸುಕೊಂಡು ಮೆರೆಯುತ್ತಿದ್ದ. ಅವರ ಮಾವನೊಬ್ಬ BJP ಪಕ್ಷದಲ್ಲಿ ಕೆಲಸ ಮಾಡುತ್ತಾ ಯಡಿಯೂರಪ್ಪನಿಗೆ ಆಪ್ತನಾಗಿದ್ದ ಕಾರಣಕ್ಕೆ BJP ಸರ್ಕಾರದ ಅವಧಿಯಲ್ಲಿ ಈತನೂ ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದ. ಈಗ ಕಾಂಗ್ರೆಸ್ ಸರ್ಕಾರ ಬಂದಮೇಲೆ ಚನ್ನಪಟ್ಟಣದ ಪೊಲೀಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಅಲ್ಲಿ ಲೆಫ್ಟ್ -ರೈಟ್ ಹೇಳಿಕೊಡುತ್ತಿದ್ದಾನಂತೆ.
ಸರಿಪಡಿಸಬೇಕಿದ್ದ ಜನಪ್ರತಿನಿಧಿಗಳು ಇಂತಹ ಕಳ್ಳ ಪೊಲೀಸರನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಲೂಟಿಯಲ್ಲಿ ತೊಡಗಿದ್ದಾರೆ. ಇನ್ನು ಇಷ್ಟೆಲ್ಲಾ ವಿಚಾರಗಳು ಗೊತ್ತಿದ್ದರೂ ನಮ್ಮ ಮಹಾಜನತೆ ಇಂತಹ ಲೂಟಿಕೋರ ವ್ಯವಸ್ಥೆಯನ್ನು ನಿರ್ಮಿಸಿ ಪೋಷಿಸುತ್ತಿರುವ ಕಳ್ಳ-ಖದೀಮ ಜನರನ್ನೆ ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ
ನ್ಯಾಮತಿಯ ಎಸ್ಬಿಐ ಬ್ಯಾಂಕ್ನಲ್ಲಿ ಕಳೆದ ಆರು ತಿಂಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನು ಭೇಡಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದ ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನು ಬ್ಯಾಂಕ್ನಿಂದ ಕದ್ದುಕೊಂಡು ಹೋಗಿದ್ದ 17.750 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಚಿನ್ನವನ್ನು ಪ್ರದರ್ಶನ ಮಾಡಲಾಯ್ತು. ನಾನಾ ರೀತಿ ಬಂಗಾರದ ಚೈನ್, ಉಂಗುರವನ್ನು ಜೋಡಿಸಿ ಇಡಲಾಗಿದೆ. ಹೀಗಾಗಿ ಎಸ್ಪಿ ಕಚೇರಿ ಒಂದು ರೀತಿ ಬಂಗಾರದ ಅಂಗಡಿಯಂತೆ ಕಾಣಿಸುತ್ತಿದೆ. ಎತ್ತ ಕತ್ತು ತಿರುಗಿಸಿ ನೋಡಿದ್ರೂ ಸಹ ಚಿನ್ನಾಭರಣಗಳು ಕಣ್ಣಿಗೆ ಕುಕ್ಕುತ್ತವೆ. ಈ ಒಂದು ದೃಶ್ಯವನ್ನು ನೀವು ಸಹ ಒಂದು ಕಣ್ತುಂಬಿಕೊಳ್ಳಿ.
ಕಂದಿಗೆರೆ ಜಗದೀಶ್ ಮತ್ತು ಜವಗೊಂಡನಹಳ್ಳಿ ಕೇಶವ ಮಧ್ಯ ಮಾರಾಮಾರಿ, ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಂದಿಗೆರೆ ಜಗದೀಶ್ ಮೂಗು ತೂರಿಸುತ್ತಿರುವುದೇ ಇದಕ್ಕೆ ಕಾರಣ
We use cookies to analyze website traffic and optimize your website experience. By accepting our use of cookies, your data will be aggregated with all other user data.